ಮುಂಬೈ: ಆರು ವರ್ಷಗಳ ಅವಧಿಯಲ್ಲಿ ಚಿನ್ನ ಈಗ ಅತಿ ದುಬಾರಿಯಾಗಿದೆ. ಇದಕ್ಕೆ ಅಮೆರಿಕ-ಇರಾನ್ ನಡುವಿನ ಸಂಘರ್ಷ ಕಾರಣ.
ಇರಾನ್ನ ರೆವಲ್ಯೂಷನರಿ ಗಾರ್ಡ್ ಕೋರ್ ಮುಖ್ಯಸ್ಥ ಸೊಲೊಮನಿ ಅವರನ್ನು ಅಮೆರಿಕ ಕ್ಷಿಪಣಿ ದಾಳಿ ನಡೆಸಿ ಹತ್ಯೆಗೈದ ನಂತರ ಇರಾಕ್ ಹಾಗೂ ಅಮೆರಿಕ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿರುವುದರಿಂದ ಚಿನ್ನ ಹಾಗೂ ತೈಲ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಚಿನ್ನದ ಜತೆ ಬೆಳ್ಳಿ ಮತ್ತು ಪ್ಲಾಟಿನಂ ಬೆಲೆ ಏರಿಕೆಯಾಗಿದೆ. ಚಿನ್ನದ ಗಟ್ಟಿ ದರ 2020ರಲ್ಲಿ ಅಧಿಕವಾಗಲಿದೆ. ಕಳೆದ ವರ್ಷ ಅಧಿಕ ವಾರ್ಷಿಕ ಲಾಭ ಗಳಿಸಿದ್ದ ಚಿನ್ನ ಯುದ್ಧ ಭೀತಿಯಿಂದ ವಹಿವಾಟಿನಲ್ಲಿ ಏರುಪೇರು ಕಾಣುವ ಅಪಾಯ ಎದುರಾಗಿದೆ.
ಆಸ್ಟ್ರೇಲಿಯಾದ ಅತಿದೊಡ್ಡ ಚಿನ್ನ ಉತ್ಪಾದಕ ಸಂಸ್ಥೆ ನ್ಯೂಕ್ರೆಸ್ಟ್ ಮೈನಿಂಗ್ ಲಿಮಿಟೆಡ್ ಸಿಡ್ನಿಯ ವಹಿವಾಟಿನಲ್ಲಿ ಶೇ. 3.1 ಏರಿಕೆಯಾಗಿದೆ. ನಾರ್ದರ್ನ್ ಸ್ಟಾರ್ ರಿಸೋರ್ಸಸ್ ಲಿಮಿಟೆಡ್ ವಹಿವಾಟಿನಲ್ಲಿ ಶೇ. 1.7 ಹಾಗೂ ಎವಲ್ಯೂಷನ್ ಮೈನಿಂಗ್ ಲಿಮಿಟೆಡ್ ವಹಿವಾಟಿನಲ್ಲಿ ಶೇ. 4.1 ಹೆಚ್ಚಾಗಿದೆ.
ಇರಾನ್-ಅಮೆರಿಕ ಸಂಘರ್ಷ, ಚಿನ್ನ ಮತ್ತಷ್ಟು ದುಬಾರಿ
Follow Us