ಕೋಳಿಕ್ಕೋಡ್: ಮನುಷ್ಯರಿಗೆ, ಹೆಚ್ಚೆಂದರೆ ಕೆಲವೆಡೆ ನಾಯಿಗಳಿಗೆ ಸ್ಮಶಾನಗಳಿರುವುದನ್ನು ನೋಡಿರಬಹುದು. ಆದರೆ, ಇಲ್ಲಿ ಮೀನುಗಳಿಗೂ ಸ್ಮಶಾನವಿದೆ!
ಕೇರಳದ ಬೇಪೂರ್ ಪಟ್ಟದ ಸಮುದ್ರ ದಂಡೆಯಲ್ಲಿ ಮಣ್ಣು, ಸಿಮೆಂಟ್ ಜೊತೆಗೆ ಏಕ ಬಳಕೆ ಪ್ಲಾಸ್ಟಿಕ್ ಬಾಟಲ್ಗಳು ತುಂಬಿರುವ ಕಬ್ಬಿಣ ಚೌಕಟ್ಟಿನ ಸ್ಮಶಾನವಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ಪ್ಯಾರೊಟ್ಫಿಶ್, ಲೆದರ್ಬ್ಯಾಕ್ ಟುರ್ಟ್ಲೆಸ್, ಈಗಲ್ ರಾಯ್ಸ್, ಸಾಫಿಶ್, ಡುಗಾಂಗ್, ಝೀಬ್ರಾ ಶಾರ್ಕ್, ಹ್ಯಾಮ್ಮರ್ಹೆಡ್ ಶಾರ್ಕ್ ಮೀನು ಅಥವಾ ಸಿಹಿನೀರಿನ ಮೀನುಗಳ ಫೋಟೋಗಳನ್ನು ಸಮಾಧಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಪ್ಲಾಸ್ಟಿಕ್ ಬಳಕೆಯಿಂದ ಜಲಚರಗಳಿಗೆ ಉಂಟಾಗುತ್ತಿರುವ ತೊಂದರೆ ಕುರಿತು ಅರಿವು ಮೂಡಿಸುವುದೂ ಇದರ ಉದ್ದೇಶವಾಗಿದೆ.