ರಾಜಕೋಟ್, ಗುಜರಾತ್ ನ ಹಸನ್ ಸಫೀನ್ ಎಂಬುವರು ತಮ್ಮ 22ನೇ ವಯಸ್ಸಿಗೆ ಇಲ್ಲಿನ ಜಾಮ್ ನಗರದ ಪೊಲೀಸ್ ಆಗಿ ನೇಮಕಗೊಳ್ಳುವ ಮೂಲಕ ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹಸನ್ ಸಪೀನ್ ಡಿ. 23ರಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇವರು ಕಳೆದ ವರ್ಷ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ 570ನೇ ಶ್ರೇಯಾಂಕ ಗಳಿಸಿದ್ದರು. ಇವರಿಗೆ ಐಎಎಸ್ ಅಧಿಕಾರಿಯಾಗುವ ಕನಸಂತೆ.