ನವದೆಹಲಿ: ಈ ಬಾರಿಯೂ ಪ್ರತಿಷ್ಠಿತ 92ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಿರೂಪಕರಿಲ್ಲದೆ ನಡೆಯಲಿದೆ.
ಎಬಿಸಿ ಎಂಟರ್ಟೈನ್ಮೆಂಟ್ ಅಧ್ಯಕ್ಷ ಕರೇ ಬರ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
2019ರಲ್ಲೂ ನಿರೂಪಕರಿಲ್ಲದೆ ಕಾರ್ಯಕ್ರಮ ನಡೆದಿತ್ತು. ಈ ಮೊದಲು ಕಾರ್ಯಕ್ರಮದಲ್ಲಿ ನಟ ಕೇವಿನ್ ಹಾಟ್ಸ್ ಅವರು ಸಲಿಂಗ ಕಾಮದ ಬಗ್ಗೆ ಮಾತನಾಡಿ ವಿವಾದಕ್ಕಿಡಾಗಿದ್ದರು. ನಂತರ ಕಾರ್ಯಕ್ರಮವನ್ನು ನಿರೂಪಕರಿಲ್ಲದೆ ನಡೆಸಲಾಗುತ್ತಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿವರ್ಷದಂತೆ ಎಬಿಸಿ ವಾಹಿನಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆಟ್ಸ್ ಆ್ಯಂಡ್ ಸೈನ್ಸ್ (ಎಎಂಪಿಎಎಸ್) ಜತೆಗೂಡಿ ಪ್ರಸಾರ ಮಾಡಲಿದೆ. ಫೆ.9ರಂದು ಕಾರ್ಯಕ್ರಮ ಪ್ರಸಾರವಾಗಲಿದೆ
ಈ ಬಾರಿಯೂ ಆಸ್ಕರ್ ಅವಾರ್ಡ್ ಸಮಾರಂಭಕ್ಕೆ ನಿರೂಪಕರಿಲ್ಲ!
Follow Us