ಲಕ್ನೋ: ಉನ್ನಾವೋ ಅತ್ಯಾಚಾರದ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಬೆಳಗ್ಗೆ ಲಕ್ನೋದಿಂದ ನವದೆಹಲಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ.
ಸಂತ್ರಸ್ತೆಗೆ ಐವರು ಆರೋಪಿಗಳು ಬೆಂಕಿ ಹಚ್ಚಿ ಕೊಲೆ ಯತ್ನ ನಡೆಸಿದ್ದು, ತೀವ್ರ ಗಾಯಗೊಂಡಿರುವ ಆಕೆಯನ್ನು ನವದೆಹಲಿಯ ಆಸ್ಪತ್ರೆಗೆ ಸಫ್ಧರ್‌ಗಂಜ್ ಸ್ಥಳಾಂತರಿಸಲಾಗಿದೆ.
ಶೇ. 90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಆಕೆಯನ್ನು ಏರ್ ಆಂಬುಲೆನ್ಸ್ ಮೂಲಕ ಕರೆತರಲಾಯಿತು. ಇದಕ್ಕೂ ಮೊದಲು ಆಂಬುಲೆನಲ್ಲಿ ಝೀರೋ ಟ್ರಾಫಿಕ್ ಮೂಲಕ ಸಿವಿಲ್ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು ಎಂದು ಮೂಲಗಳು ತಿಳಿಸಿವೆ.
ಉನ್ನಾವೊ ಅತ್ಯಾಚಾರ ಸಂತ್ರಸ್ತೆ ದೆಹಲಿಗೆ ಸ್ಥಳಾಂತರ
Follow Us