Saturday, January 28, 2023

ಎರಡು ಕೋಟಿ ರೂಪಾಯಿ ಕಾರಿಗೆ ಹತ್ತು ಲಕ್ಷ ದಂಡ

Follow Us

ಅಹ್ಮದಾಬಾದ್ ; ಎರಡು ಕೋಟಿ ರೂಪಾಯಿ ಮೌಲ್ಯದ ವಿಲಾಸಿ ಕಾರು ಪೋರ್ಚೆ 911 ಮಾಲೀಕನಿಗೆ ಪೊಲೀಸರು  10 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಸೂಕ್ತ ದಾಖಲೆ ಪತ್ರ ಹಾಜರುಪಡಿಸಲು ವಿಫಲ ಹಾಗೂ ನಂಬರ್ ಪ್ಲೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಂಡ ವಿಧಿಸಲಾಗಿದೆ. ತನಿಖೆಯ ವೇಳೆ ಕಾರು ಮಾಲಿಕ ಸೂಕ್ತ ದಾಖಲೆ ಪತ್ರ ಸಲ್ಲಿಸಿಲ್ಲ. ಅಲ್ಲದೇ ಇನ್ನಿತರ ಕಾನೂನು ಉಲ್ಲಂಘಿಸಿರುವ ಅಂಶ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ 9 ಲಕ್ಷದ 80 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಾರಿಗೆ ಪ್ರಾಧಿಕಾರದಲ್ಲಿ ದಂಡ ಪಾವತಿಸಿದ ಬಳಿಕವಷ್ಟೇ ಕಾರು ಬಿಡುಗಡೆ ಮಾಡಲಾಗುವುದು. ಅಲ್ಲಿಯ ತನಕ ಕಾರು  ಪೊಲೀಸರ ವಶದಲ್ಲಿ ಮುಂದುವರಿಯಲಿದೆ ಎಂದು ಸಹಾಯಾಕ ಪೊಲೀಸ್ ಆಯುಕ್ತ ತೇಜಸ್ ಪಟೇಲ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಥೈಲ್ಯಾಂಡ್‌ನಲ್ಲಿ ಜಾಲಿ ಮೂಡ್‌ನಲ್ಲಿ ಬಿಗ್‌ ಬಾಸ್‌ ಅಮೂಲ್ಯ

newsics.com ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್‌ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಈ...

ಟಿ20 ಸರಣಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು

newsics.com ರಾಂಚಿ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿದೆ. ರಾಂಚಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ನ್ಯೂಜಿಲೆಂಡ್ 21 ರನ್‌ಗಳ ಜಯ ದಾಖಲಿಸಿದೆ. ಟಾಸ್‌ ಗೆದ್ದ ಭಾರತ ನ್ಯೂಜಿಲೆಂಡ್‌ಗೆ...

55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

newsics.com ದೆಹಲಿ: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ವಿಮಾನವೊಂದರ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕ...
- Advertisement -
error: Content is protected !!