ಮುಂಬೈ: ಐಸಿಐಸಿಐ ಬ್ಯಾಂಕ್ ವಿರುದ್ಧ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಇದರ ವಿಚಾರಣೆ ಸೋಮವಾರ (ಡಿ.2) ನಡೆಯಲಿದೆ. ಕೆಲಸದಿಂದ ವಜಾಗೊಳಿಸಿ, ಹಲವು ಸವಲತ್ತುಗಳನ್ನು ಹಿಂಪಡೆದ ಐಸಿಐಸಿಐ ಬ್ಯಾಂಕ್ನ ಕ್ರಮವನ್ನು ಚಂದಾ ಕೊಚ್ಚರ್ ಪ್ರಶ್ನಿಸಿದ್ದಾರೆ. ಬ್ಯಾಂಕ್ ಈ ವರ್ಷ ಆರಂಭದಲ್ಲಿ ಚಂದಾ ಕೊಚ್ಚಾರ್ ಅವರನ್ನು ಕೆಲಸದಿಂದ ತೆಗೆಯಲು ಮತ್ತು ಅವರಿಗೆ ನೀಡಿದ್ದ ವಿವಿಧ ಸವಲತ್ತು ಹಿಂಪಡೆಯಲು ನಿರ್ಣಯ ಕೈಗೊಂಡಿತ್ತು.