ನವದೆಹಲಿ: ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಕಣ್ತುಂಬಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲ್ಲರಂತೆ ನಾನೂ ಸೂರ್ಯಗ್ರಹಣದ ಬಗ್ಗೆ ಉತ್ಸಾಹ ಹೊಂದಿದ್ದೇನೆ. ಮೋಡ ಕವಿದಿದ್ದರಿಂದ ದುರದೃಷ್ಟವಶಾತ್ ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ, ನೇರಪ್ರಸಾರದ ಮೂಲಕ ಕೇರಳದ ಕೋಳಿಕ್ಕೋಡ್ ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಸಂಭವಿಸಿದ ಗ್ರಹಣದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದೇನೆ. ಪರಿಣತರ ಮೂಲಕ ನನ್ನ ಜ್ಞಾನ ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ.
ಅಲ್ಲದೆ, ಗ್ರಹಣ ವೀಕ್ಷಿಸುತ್ತಿರುವ, ಪರಿಣಿತರೊಂದಿಗೆ ಚರ್ಚಿಸುತ್ತಿರುವ ಮತ್ತು ಸನ್ ಗ್ಲಾಸ್ ಹಿಡಿದು ಸೂರ್ಯನತ್ತ ನೋಡುತ್ತಿರುವ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಧಾನಿ ಶೇರ್ ಮಾಡಿದ್ದಾರೆ.