ಬೆಂಗಳೂರು: ದೇಶದ ಹಲವೆಡೆ ಕಂಕಣ ಸೂರ್ಯಗ್ರಹಣ ಗೋಚರವಾಗಿದೆ.
ಆದರೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣವಿರುವುದರಿಂದ ಗ್ರಹಣ ಗೋಚರವಾಗದೆ ಜನ ನಿರಾಸೆಗೊಂಡಿದ್ದಾರೆ. ಕಲಬುರಗಿ, ರಾಯಚೂರು, ಕೊಪ್ಪಳ, ಕೋಲಾರ, ಬೆಳಗಾವಿ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಕಂಕಣ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರವಾಗಿಲ್ಲ.
ದಕ್ಷಿಣ ಕನ್ನಡ, ಬಳ್ಳಾರಿ, ಮೈಸೂರು, ಅಹಮದಾಬಾದ್, ಭುವನೇಶ್ವರ್, ಚೆನ್ನೈ, ಕೊಚ್ಚಿ ಸೇರಿ ದೇಶದ ಹಲವೆಡೆ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರವಾಗಿದೆ.