ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದ್ದ ಹೆಚ್ಚುವರಿ ಸೇನಾ ಪಡೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿರುವುದನ್ನು ಗಮನಿಸಿ ಹೆಚ್ಚುವರಿ ಸೇನೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂಂಚ್ ವಲಯವನ್ನು ಹೊರತುಪಡಿಸಿದಂತೆ ಜಮ್ಮು ವಲಯದಿಂದ ಬಹುತೇಕ ಅರಸೇನಾ ಪಡೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯ ಭದ್ರತೆ ನೀಡಲಾಗಿದೆ. ಬಾರಾಮುಲ್ಲ, ಬಂಡಿಪೊರಾ ಮತ್ತಿತರ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದ ಅರಸೇನಾ ಪಡೆಯ 300 ತುಕಡಿಯಲ್ಲಿ 20 ಮಂದಿ ಈಗಾಗಲೇ ಕಣಿವೆ ರಾಜ್ಯ ತೊರೆದಿದ್ದಾರೆ. ಹಂತ ಹಂತವಾಗಿ ಸೇನೆಯನ್ನು ಹಿಂಪಡೆಯಲಾಗುವುದು. ಆದರೆ, ಪೂರ್ಣ ಪ್ರಮಾಣದ ಸೇನೆಯ ಹಿಂತೆಗೆತಕ್ಕೆ ಯಾವುದೇ ಸಮಯದ ಮಿತಿಯಿಲ್ಲ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ಕಣಿವೆ ರಾಜ್ಯದಿಂದ ಹೆಚ್ಚುವರಿ ಸೇನೆ ವಾಪಸ್
Follow Us