ತಿರುವನಂತಪುರ: ಮಾರಣಾಂತಿಕ ಕರೋನಾ ವೈರಸ್ ಹರಡುವಿಕೆ ತಡೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೇರಳ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಎಲ್ಲ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಈವರೆಗೆ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದ್ದು ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಕೊಚ್ಚಿನ್ ವಿಮಾನ ನಿಲ್ದಾಣಾಧಿಕಾರಿಗಳು ತಿಳಿಸಿದ್ದಾರೆ.
ಉಸಿರಾಟದ ಮೂಲಕ ಹರಡುವ ಕರೋನಾ ವೈರಸ್ ಚೀನಾದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ನಲ್ಲಿ ಪತ್ತೆಯಾಗಿದೆ. ಈ ವೈರಸ್ ನಿಂದ ಈವರೆಗೆ 9 ಮಂದಿ ಮೃತಪಟ್ಟಿದ್ದಾರೆ. 440 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ವರದಿಗಳು ತಿಳಿಸಿವೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ವುಹಾನ್ ನಿವಾಸಿಗಳು ನಗರ ಬಿಟ್ಟು ಎಲ್ಲ ತೆರಳದಂತೆ ಸೂಚನೆ ನೀಡಿದೆ.
ಕರೋನಾ ವೈರಸ್; ದೇಶದಲ್ಲೂ ಕಟ್ಟೆಚ್ಚರ
Follow Us