ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಲು ಬಿಡುವುದಿಲ್ಲ ಎಂದು ದಕ್ಷಿಣ ಗೋವಾದ ಮಾಜಿ ಸಂಸದ, ಬಿಜೆಪಿಯ ಹಿರಿಯ ನಾಯಕ ನರೇಂದ್ರ ಸಾವೈಕರ್ ಹೇಳಿದ್ದಾರೆ.
ಪಣಜಿಯ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನಮ್ಮ ಜೀವನದಿ. ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಲಾಗುವುದಿಲ್ಲ ಮತ್ತು ತಿರುಗಿಸಲು ಬಿಡುವುದೂ ಇಲ್ಲ. ಗೋವಾ ರಾಜ್ಯದ ಜನ ಹೆದರುವ ಅಗತ್ಯವಿಲ್ಲ ಎಂದು ಸಾವೈಕರ್ ಅಭಯ ನೀಡಿದ್ದಾರೆ.