
ಮುಂಬೈ: ಬಹುಮತ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಲು ಸೋಮವಾರ ಸಂಜೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ, ಎಸ್‌ಪಿ ಶಾಸಕರು ನಗರದ ಪಂಚತಾರಾ ಹೋಟೆಲ್‌ವೊಂದಕ್ಕೆ ಸ್ಥಳಾಂತರಗೊಂಡಿದ್ದಾರೆ.
ಎನ್‌ಸಿಪಿ ವರಿಷ್ಠ ಶರದ್ ಪವಾರ್, ಅವರ ಪುತ್ರಿ ಮತ್ತು ಸಂಸದೆ ಸುಪ್ರಿಯಾ ಸೂಲೆ, ಶಿವ ಸೇನೆಯ ಅಧ್ಯಕ್ಷ ಉದ್ದವ್ ಠಾಕ್ರೆ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಬು ಆಸಿಮ್ ಅಜ್ಮಿ ಅವರೊಂದಿಗೆ ತಮ್ಮ ಶಾಸಕರೊಂದಿಗೆ ಸಂಜೆ 7.30ರ ಸುಮಾರಿಗೆ ಇಲ್ಲಿನ ಗ್ರ್ಯಾಂಡ್ ಹೈಯಾಟ್ ಹೋಟೆಲ್‌ಗೆ ಆಗಮಿಸಿದರು. ಒಟ್ಟು 162 ಶಾಸಕರು ಹೋಟೆಲ್‌ನಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.