
ಚೆನ್ನೈ; ನಗರ ಸಂಸ್ಥೆ ದುರಸ್ತಿಗೊಳಿಸುತ್ತಿದ್ದ ದೀಪದ ಕಂಬ ಬಿದ್ದ ಪರಿಣಾಮ ಕಾಲು ಕಳೆದುಕೊಂಡು ಅಂಗವಿಕಲನಾದ ವ್ಯಕ್ತಿಗೆ ಮದ್ರಾಸ್ ಹೈಕೋರ್ಟ್ 63 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.
ಚೆನ್ನೈ ನಗರ ಪಾಲಿಕೆ ಮತ್ತು ತಮಿಳುನಾಡು ವಿದ್ಯುತ್ ಪ್ರಸರಣದ ನಿಗಮದ ನಿರ್ಲಕ್ಷ್ಯದಿಂದ ಆನಂದ್ ಕುಮಾರ್ ಎಂಬ ವ್ಯಕ್ತಿ ತನ್ನ ಸಂಪೂರ್ಣ ಜೀವನವನ್ನು ವ್ಹೀಲ್ ಚೇರ್ ನಲ್ಲಿ ಕಳೆಯುವಂತಾಗಿದೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಶೀಘ್ರದಲ್ಲಿ ಆತನಿಗೆ ಪರಿಹಾರ ನೀಡುವಂತೆ ನಗರ ಪಾಲಿಕೆಗೆ ಸೂಚಿಸಿದೆ.
2009ರ ಏಪ್ರಿಲ್ ನಲ್ಲಿ ಚೆನ್ನೈನ ಮರೀನಾ ಬೀಚ್ ನಲ್ಲಿ ವಿದ್ಯುತ್ ಕಂಬ ದುರಸ್ತಿಗೊಳಿಸುತ್ತಿದ್ದ ವೇಳೆ ಕರೌಸಲ್ ನಿರ್ವಾಹಕ ಎನ್. ಆನಂದ್ ಕುಮಾರ್ ಕಾಲ ಮೇಲೆ ವಿದ್ಯುತ್ ಕಂಬ ಬಿದ್ದು ಆತ ಶಾಶ್ವತ ಅಂಗವಿಕಲನಾಗಿದ್ದ. ಈತನಿಗೆ ಪರಿಹಾರ ನೀಡುವಂತೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಚೆನ್ನೈ ನಗರ ಪಾಲಿಕೆ ಮೇಲ್ಮನವಿ ಸಲ್ಲಿಸಿತ್ತು.