Thursday, December 7, 2023

ಕಾಶ್ಮೀರ ಪರಿಸ್ಥಿತಿ ಸಂಸತ್ ನಲ್ಲಿ ಹೇಳಿಕೆ ನೀಡಿದ ಅಮಿತ್ ಶಾ

Follow Us

ಜಮ್ಮು ಕಾಶ್ಮೀರದಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿ ವಿಶೇಷಾಧಿಕಾರ ರದ್ದುಪಡಿಸಿದ ಬಳಿಕ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ   ಚಿಕಿತ್ಸೆ ನೀಡಲಾಗುತ್ತಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಅಮಿತ್ ಶಾ ರಾಜ್ಯಸಭೆಗೆ ಮಾಹಿತಿ ನೀಡಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಕೇಂದ್ರ ಸರ್ಕಾರಕ್ಕೆ ಇಂಟರ್ ನೆಟ್ ಸೌಲಭ್ಯಕ್ಕಿಂತ  ಭದ್ರತಾ ಪಡೆಗಳ ಸುರಕ್ಷತೆ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಹಲವು ನಿರ್ಬಂಧ ವಿಧಿಸಲಾಗಿತ್ತು ಎಂದು ಅಮಿತ್ ಶಾ ವಿವರಿಸಿದರು.

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...

ಹೊತ್ತಿ ಉರಿದ ಕಾರು – ಟಿಪ್ಪರ್ : ಇಬ್ಬರು ಸಜೀವ ದಹನ

Newsics.com ಬೆಳಗಾವಿ : ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬಾಲಕಿ ಸೇರಿ ಇಬ್ಬರು ಸಜೀವ ದಹನವಾದರೆ ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ...
- Advertisement -
error: Content is protected !!