ನವದೆಹಲಿ: ದೇಶದ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಹಂತ ಹಂತವಾಗಿ ಪ್ರವೇಶ ಕಲ್ಪಿಸಲಾಗುವುದು ಎಂದು ಸರ್ಕಾರ ಸೋಮವಾರ ರಾಜ್ಯಸಭೆಗೆ ತಿಳಿಸಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್, ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ಕಲ್ಪಿಸುವ ಪೈಲೆಟ್ ಯೋಜನೆಯನ್ನು 2018-19 ಸಾಲಿನಲ್ಲಿ ಮಿಜೋರಾಂ ಚಿಂಗ್ ಚಿಪ್ ನಲ್ಲಿ ಆರಂಭಿಸಲಾಗಿದೆ. ಕರ್ನಾಟಕದ ಕೊಡಗು, ಆಂಧ್ರ ಪ್ರದೇಶದ ಕಲಿಕಿರಿ, ಉತ್ತರಾಖಂಡದ ಘೋರಾಖಲ್, ಮಹಾರಾಷ್ಟ್ರದ ಚಂದ್ರಾಪುರ್ ಹಾಗೂ ಕರ್ನಾಟಕದ ಬಿಜಾಪುರ ಸೈನಿಕ ಶಾಲೆಗಳಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಬಾಲಕಿಯರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕೊಡಗು, ಬಿಜಾಪುರ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ
Follow Us