ಕೋಲ್ಕತ: ಇಲ್ಲಿನ ಕೋಲ್ಕತ ಪೋರ್ಟ್ ಟ್ರಸ್ಟ್ ಗೆ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಭಾನುವಾರ ಕೋಲ್ಕತ್ತ ಪೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಭಾರತೀಯ ಜನಸಂಘದ ಸಂಸ್ಥಾಪಕರಾಗಿರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕೋಲ್ಕತದವರೇ ಆಗಿದ್ದಾರೆ ಎಂದರು.
ಕೈಗಾರಿಕೆ, ಆಧ್ಯಾತ್ಮಿಕ ಮತ್ತು ಸ್ವಾವಲಂಬನೆಯನ್ನು ಪ್ರತಿನಿಧಿಸುವ ಈ ಬಂದರು 150ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವದನ್ನು ಇನ್ನಷ್ಟು ವಿಶೇಷವಾಗಿಸಬೇಕು. ನವ ಭಾರತದ ಒಂದು ಶಕ್ತಿಶಾಲಿ ಸಂಕೇತವನ್ನಾಗಿ ಮಾಡಬೇಕು ಎಂದು ಮೋದಿ ಹೇಳಿದರು.
ಕೋಲ್ಕತ ಪೋರ್ಟ್ ಗೆ ಶ್ಯಾಮಪ್ರಸಾದ್ ಮುಖರ್ಜಿ ಹೆಸರು: ಮೋದಿ ಘೋಷಣೆ
Follow Us