ನವದೆಹಲಿ: ದೆಹಲಿಯ ರಾಜಪಥದಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ತಯಾರಾದ ಅಪಾಚೆ 64 ಇ ಮತ್ತು ಚಿನೋಕ್ ಸಿಎಚ್ 47 ಹೆಲಿಕಾಪ್ಟರ್ ಭಾಗಿಯಾಗಲಿವೆ.
ಈ ಸಾಲಿನ ವಾಯುಪಡೆಯ ಪ್ರದರ್ಶನದಲ್ಲಿ 16 ಯುದ್ಧ, 10 ಸಾರಿಗೆ ವಿಮಾನಗಳ ಜೊತೆಗೆ 19 ಹೆಲಿಕಾಪ್ಟರ್ ಗಳು ಸೇರಿದಂತೆ 41 ಜೆಟ್ ಗಳು ಭಾಗಿಯಾಗಲಿವೆ.