ಮುಂಬೈ: ಬಿಜೆಪಿ ನಾಯಕಿ ಪಂಕಜ್ ಮುಂಢೆ ತಮ್ಮ ಹುಟ್ಟೂರು ಬೀಡ್ ನಲ್ಲಿ ತಂದೆ ಗೋಪಿನಾಥ್ ಮುಂಡೆ ಜಯಂತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಶುಭ ಕೋರುವ ಬ್ಯಾನರ್ ನಲ್ಲಿ ಕಮಲದ ಚಿಹ್ನೆ ಮತ್ತು ಪ್ರಧಾನಿ ಮೋದಿ ಅವರ ಭಾವಚಿತ್ರ ಕಣ್ಮರೆಯಾಗಿದೆ. ಇದು ಹಲವು ವದಂತಿಗಳಿಗೆ ಕಾರಣವಾಗಿದೆ. ಇಂದು ಬೀಡ್ ನ ಗೋಪಿನಾಥ್ ಗಢ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಪಂಕಜ್ ಮುಂಡೆ ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ.