ನವದೆಹಲಿ: ;ಚಳಿಗಾಲದ ರಜೆ ಬಳಿಕ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮತ್ತೆ ಆರಂಭವಾಗಲಿದೆ. ಸಾಲು ಸಾಲು ಮಹತ್ವದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಇನ್ನು ಮುಂದೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಛಾನ ಮಾನ ರದ್ದುಪಡಿಸಿದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸಲ್ಲಿಸಿರುವ ಅರ್ಜಿ ಕೂಡ ಇದರಲ್ಲಿ ಸೇರಿದೆ. ಶಬರಿ ಮಲೆ ಪ್ರವೇಶಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಏಳು ಮಂದಿ ಸದಸ್ಯರ ಪೀಠ ಕೈಗೆತ್ತಿಕೊಳ್ಳಲಿದೆ.