ನವದೆಹಲಿ: ಇಂದು ವಿಶ್ವ ಏಡ್ಸ್ ದಿನಾಚರಣೆ. ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನಾಚರಣೆ ಆಚರಿಸಲಾಗುತ್ತಿದೆ.
ಈ ವರ್ಷ “ಸಮುದಾಯದಿಂದ ಬದಲಾವಣೆ ಸಾಧ್ಯ’ ಎಂಬ ಧ್ಯೇಯದೊಂದಿಗೆ ವಿಶ್ವ ಏಡ್ಸ್ ದಿನವನ್ನು ಅಚರಿಸಲಾಗುತ್ತಿದೆ. ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ರೋಗದ ವಿರುದ್ಧದ ಹೋರಾಟದಲ್ಲಿ ಜನರನ್ನು ಸೇರಿಸಿಕೊಳ್ಳುವ ಅವಕಾಶವನ್ನು ಈ ದಿನ ಕಲ್ಪಿಸಲಾಗುತ್ತಿದೆ.
ವಿಶ್ವ ಏಡ್ಸ್ ದಿನವನ್ನು ಮೊದಲ ಬಾರಿಗೆ 1988 ರಲ್ಲಿ ಆಚರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2018 ರಲ್ಲಿ 37.9 ಮಿಲಿಯನ್ ಜನರು ಎಚ್ಐವಿ ರೋಗದಿಂದ ಬಳಲುತ್ತಿದ್ದಾರೆ.