ಮುಂಬೈ: ಹುಂಡೈ ಮೋಟಾರ್ ಲಿಮಿಟೆಡ್ ತನ್ನ ಎಲ್ಲ ವಿಧದ ವಾಹನಗಳ ಬೆಲೆ ಇದೇ ಜನವರಿಯಿಂದ ಏರಿಕೆಯಾಗಲಿದೆ.
ಬೆಲೆ ಏರಿಕೆಯ ಪ್ರಮಾಣ ಹಾಗೂ ದಿನಾಂಕವನ್ನು ಹುಂಡೈ ಇನ್ನೂ ಪ್ರಕಟಿಸಿಲ್ಲ.
ದೇಶದ ಎರಡನೇ ದೊಡ್ಡ ವಾಹನ ತಯಾರಿಕಾ ಕಂಪನಿಯಾಗಿರುವ ಹುಂಡೈ, ಇನ್ಪುಟ್ಗಳ ಹಾಗೂ ತಯಾರಿಕಾ ಉಪಕರಣಗಳ ವೆಚ್ಚದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಯಲ್ಲಿ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿರುವುದಾಗಿ ತಿಳಿಸಿದೆ.
ಇದರೊಂದಿಗೆ ಟಾಟಾ ಮೋಟಾರ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ವಾಹನ ತಯಾರಿಕಾ ಕಂಪನಿಗಳೂ ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಜನವರಿಯಿಂದ ಹುಂಡೈ ಕಾರುಗಳ ಬೆಲೆ ಹೆಚ್ಚಳ
Follow Us