ನವದೆಹಲಿ: ಜೆ ಎನ್ ಯು ಆವರಣದಲ್ಲಿ ನಡೆದ ಹಿಂಸಾಚಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಖಂಡಿಸಿದ್ದಾರೆ. ಜೆ ಎನ್ ಯು ನಲ್ಲಿ ಗಂಭೀರ ವಿಚಾರಗಳ ಬಗ್ಗೆ ವಾಗ್ವಾದ, ಬಿರುಸಿನ ಚರ್ಚೆ ನಡೆಯುತ್ತಿತ್ತು. ಆದರೂ ಎಂದೂ ಹಿಂಸಾಚಾರ ನಡೆದಿರಲಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವರಾಗಿರುವ ನಿರ್ಮಲ ಅವರು ಜೆ ಎನ್ ಯು ವಿನ ಹಳೆ ವಿದ್ಯಾರ್ಥಿ ಕೂಡ ಆಗಿದ್ದಾರೆ.