ಜೈಪುರ; 2008ರ ಜೈಪುರ ಸರಣಿ ಸ್ಫೋಟ ಪ್ರಕರಣದ ನಾಲ್ವರ ಆರೋಪಿಗಳನ್ನು ತಪ್ಪಿತಸ್ಥರು ಎಂದು ಜೈಪುರ ನ್ಯಾಯಾಲಯ ಬುಧವಾರ ಪ್ರಕಟಿಸಿದೆ. ಓರ್ವ ಆರೋಪಿಯನ್ನು ಆರೋಪಮುಕ್ತನನ್ನಾಗಿಸಲಾಗಿದೆ. ಈ ನಾಲ್ವರು ಅಪರಾಧಿಗಳು ಕಾನೂನುಬಾಹಿರ ಚಟುವಟಿಕೆಗಳು (ನಿಯಂತ್ರಣ) ಕಾಯ್ದೆಯಡಿ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
2008ರಲ್ಲಿ ದೆಹಲಿ, ಜೈಪುರ , ಅಹಮದಾಬಾದ್ ಮತ್ತು ಉತ್ತರಪ್ರದೇಶದ ನ್ಯಾಯಾಲಯದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2018ರ ಫೆಬ್ರವರಿಯಲ್ಲಿ ಐವರನ್ನು ಬಂಧಿಸಿದ್ದರು. ಸ್ಫೋಟಕ್ಕೆ ಮುನ್ನ ಆರೋಪಿಗಳಲ್ಲಿ ಒಬ್ಬರು ಉಡುಪಿಗೆ ಆಗಮಿಸಿ ಸ್ಫೋಟಕಗಳನ್ನು ಸಂಗ್ರಹಿಸಿದ್ದನು ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು.