ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ 1.37 ಲಕ್ಷ ರೂ. ಸಂಪಾದಿಸಿದ್ದಾರೆ.
ನಾಲ್ವರು ಅಪರಾಧಿಗಳಾದ ಅಕ್ಷಯ್ ಠಾಕೂರ್ ಸಿಂಗ್, ಮುಕೇಶ್, ಪವನ್ ಗುಪ್ತ ಹಾಗೂ ವಿನಯ್ ಶರ್ಮ ತಮ್ಮ ಏಳು ವರ್ಷದ ಜೈಲು ವಾಸದಲ್ಲಿ 1,37,000 ರೂ. ಸಂಪಾದನೆ ಮಾಡಿದ್ದಾರೆ. 23 ಬಾರಿ ಜೈಲು ನಿಯಮ ಉಲ್ಲಂಘಿಸಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧಿ ಮುಕೇಶ್ ಜೈಲಿನಲ್ಲಿ ಯಾವುದೇ ಕೂಲಿ ಕೆಲಸವನ್ನು ಆಯ್ದುಕೊಂಡಿರಲಿಲ್ಲ. 2016ರಲ್ಲಿ ಮುಕೇಶ್, ಪವನ್ ಹಾಗೂ ಅಕ್ಷಯ್ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಿದ್ದರೂ ಉತ್ತೀರ್ಣರಾಗಿಲ್ಲ. ವಿನಯ್ 2015ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದರೂ ಗಲ್ಲು ಶಿಕ್ಷೆಯಿಂದಾಗಿ ಪೂರ್ಣಗೊಳಿಸಲಾಗುತ್ತಿಲ್ಲ. ಈ ನಾಲ್ವರನ್ನು ಜ.22ರಂದು ತಿಹಾರ್ ಜೈಲಿನಲ್ಲಿ ಹ್ಯಾಂಗ್ಮನ್ ಪವನ್ ಜಲ್ಲಾದ್ ನೇಣಿಗೇರಿಸಲಿದ್ದಾರೆ.
ಜೈಲಲ್ಲಿ ನಿರ್ಭಯಾ ಅಪರಾಧಿಗಳ ಸಂಪಾದನೆ 1.37 ಲಕ್ಷ!
Follow Us