ನವದೆಹಲಿ: ನಟಿ ದೀಪಿಕಾ ಪಡುಕೋಣೆ ಅವರ “ಚಪಾಕ್” ಚಿತ್ರ ಪ್ರದರ್ಶನಕ್ಕೆ ದೆಹಲಿ ಹೈಕೋರ್ಟ್ ಶನಿವಾರ ತಡೆ ನೀಡಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಜ.15ರಿಂದ ಎಲ್ಲ ಮಲ್ಟಿಫ್ಲೆಕ್ಸ್ ಹಾಗೂ ಲೈವ್ ಸ್ಟ್ರೀಮಿಂಗ್ ಆ್ಯಪ್ಗಳಲ್ಲಿ ಹಾಗೂ ಜನವರಿ 17ರಿಂದ ಇತರೆ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ನಿರ್ದೇಶನ ನೀಡಿದೆ.
ಚಪಾಕ್ ಚಿತ್ರವು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನ ಭಾಗವಾಗಿ ಚಿತ್ರ ಮೂಡಿಬಂದಿದ್ದು, ಲಕ್ಷ್ಮೀ ಅಗರ್ವಾಲ್ ಪಾತ್ರಕ್ಕೆ ದೀಪಿಕಾ ಬಣ್ಣ ಹಚ್ಚಿದ್ದಾರೆ. ಆದರೆ, ಆಸಿಡ್ ದಾಳಿ ವಿರುದ್ಧ ಹೋರಾಡಲು ಲಕ್ಷ್ಮೀ ಅಗರ್ವಾಲ್ ಪರ ವಕಾಲತ್ತು ವಹಿಸಿದ ವಕೀಲೆ ಅಪರ್ಣಾ ಭಟ್ಗೆ ಚಿತ್ರದಲ್ಲಿ ಯಾವುದೇ ಕ್ರೆಡಿಟ್ ನೀಡದಿರುವುದು ಇದೀಗ ಚಿತ್ರತಂಡವನ್ನು ಸಂಕಷ್ಟಕ್ಕೆ ದೂಡಿದೆ.
ಜ.15ರಿಂದ ‘ಚಪಾಕ್’ ಚಿತ್ರಪ್ರದರ್ಶನಕ್ಕೆ ತಡೆ
Follow Us