ಬೀದರ್: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ‘ಉಡೆ ದೇಶ್ ಕ ಅಮ್ ನಾಗರಿಕ್’ (ಉಡಾನ್) ಯೋಜನೆಯಡಿ ಬೀದರ್ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳ ವಾರ ದೆಹಲಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬೀದರ್ ನಿಂದ ವಿಮಾನಗಳ ಹಾರಾಟಕ್ಕೆ ಎದುರಾಗಿದ್ದ ಅಡಚಣೆಗಳನ್ನು ಬಗೆಹರಿಸಲಾಗಿದೆ. ಮುಂದಿನ ಜನವರಿ 26ರಂದು ಮೊದಲ ವಿಮಾನ ಬೀದರ್‍ನಿಂದ ಬೆಂಗಳೂರಿಗೆ ಹಾರಾಟ ನಡೆಸಲಿದೆ ಬೀದರ್ ಸಂಸದ ಭಗವಂತ್ ಖೂಬ ಶನಿವಾರ ತಿಳಿಸಿದ್ದಾರೆ