ಬರೇಲಿ: ಟಿಕ್ ಟಾಕ್ ವಿಡಿಯೋ ಮಾಡಲು ಹೋದ ಯುವಕನೊಬ್ಬ ಅಚಾತುರ್ಯದಿಂದ ತನ್ನನ್ನೇ ಗುಂಡಿಕ್ಕಿ ಕೊಂದುಕೊಂಡ ಘಟನೆ ಉತ್ತರಪ್ರದೇಶದ ಹಫೀಜ್ ಗಂಜ್ ಪ್ರದೇಶದ ಮುರಿಯಾ ಭಿಕಾಂಪುರ ಗ್ರಾಮದಲ್ಲಿ ನಡೆದಿದೆ.
ಸೇನೆಯಲ್ಲಿರುವ ಯೋಗೇಂದ್ರ ಕುಮಾರ್ ಅವರ ಪುತ್ರ ಕೇಶವ್, ತನ್ನ ತಾಯಿಯಿಂದ ಟಿಕ್ ಟಾಕ್ ವಿಡಿಯೋ ಮಾಡಲು ತಂದೆಯ ಸೇವಾ ರಿವಾಲ್ವರ್ ಪಡೆದು ಕೋಣೆಗೆ ಹೋಗಿದ್ದನು. ಇದಕ್ಕಿದ್ದಂತೆ ಗುಂಡಿನ ಸದ್ದು ಕೇಳಿದಾಗ ಎಲ್ಲರೂ ಕೋಣೆಗೆ ಓಡಿಹೋಗಿ ನೋಡಿದಾಗ, ಕೇಶವ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಗುಂಡು ಹಾರಿಸಿಕೊಂಡ ಯುವಕ
Follow Us