ಲಖನೌ: ಖಾಸಗಿ ಸಂಸ್ಥೆಯ ಡಬಲ್ ಡೆಕ್ಕರ್ ಬಸ್ಸೊಂದು ಬೆಂಕಿಗಾಹುತಿಯಾಗಿದ್ದು, ಅದರಲ್ಲಿದ್ದ 21 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಘಿನೊಐ ಎಂಬ ಗ್ರಾಮದ ಬಳಿ ಲಾರಿಗೆ ಡಿಕ್ಕಿಯಾಗಿ ಬಸ್ ಹೊತ್ತಿ ಉರಿದಿದೆ.
ಶುಕ್ರವಾರ ರಾತ್ರಿ ಈ ಅವಘಡ ಸಂಭವಿಸಿದ್ದು, ಬಸ್ನಲ್ಲಿ 43 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಅದರಲ್ಲಿ 21 ಮಂದಿ ತಪ್ಪಿಸಿಕೊಂಡಿದ್ದಾರೆ. ಇವರೆಲ್ಲ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕನೌಜ್ ಜಿಲ್ಲಾಧಿಕಾರಿ ರವೀಂದ್ರಕುಮಾರ್ ತಿಳಿಸಿದ್ದಾರೆ.
ಇನ್ನೂ ಹಲವು ಪ್ರಯಾಣಿಕರಿಗೆ ಬಸ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಸ್ಥಿತಿ ಏನಾಗಿದೆ ಎಂಬುದು ತಿಳಿದಿಲ್ಲ. ಇನ್ನೂ 22 ಪ್ರಯಾಣಿಕರು ಅಪಾಯದಲ್ಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದುರಂತ ಸ್ಥಳದಲ್ಲಿದ್ದು, ಪರಿಹಾರಬಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ. ದುರಂತದಿಂದ ಎಷ್ಟು ಜನ ಪ್ರಾಣಹಾನಿಯಾಗಿದೆ ಎಂದು ನಿಖರವಾಗಿ ತಿಳಿದುಬಂದಿಲ್ಲ. ಗಾಯಾಳುಗಳಿಗೆ ಎಲ್ಲ ರೀತಿಯ ಔಷಧ ಸೌಲಭ್ಯ ನೀಡಲಾಗುವುದು. ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಆದಿತ್ಯನಾಥ್ ಘೋಷಿಸಿದರು.
ವಿಮಲ್ ಎಂಬ ಖಾಸಗಿ ಸಂಸ್ಥೆಗೆ ಸೇರಿದ ಈ ಡಬಲ್ ಡೆಕ್ಕರ್ ಬಸ್ ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದಿದೆ.
ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಬಸ್ ರಾಜಸ್ಥಾನದ ಜೈಪುರದಿಂದ ಲಖನೌಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಡಬಲ್ ಡೆಕ್ಕರ್ ಬಸ್ ಗೆ ಬೆಂಕಿ; 21 ಮಂದಿ ಪಾರು, ಅಪಾಯದಲ್ಲಿ 22 ಜನ
Follow Us