ಬೆಂಗಳೂರು: ಡೆಂಘೆಯಲ್ಲಿ ಕರ್ನಾಟಕಕ್ಕೆ ನಂಬರ್ ಒನ್ ಸ್ಥಾನ!
ಹೌದು, ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
2019ರಲ್ಲಿ ದಾಖಲಾದ ಡೆಂಘೆ ಪ್ರಕರಣಗಳಲ್ಲಿ ಶೇ.70 ರಷ್ಟು ಬೆಂಗಳೂರಿನಲ್ಲೇ ಎಂಬುದು ಬೆಚ್ಚಿಬೀಳಿಸುವ ಸಂಗತಿ. ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ ಕಳೆದ ಅಕ್ಟೋಬರ್ ವರೆಗೆ 35,000ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಹೇಳಿದೆ.
ದೇಶದ ಒಟ್ಟಾರೆ ಡೆಂಘೆ ಪ್ರಕರಣಗಳಲ್ಲಿ ಶೇ.50 ರಷ್ಟು ದಕ್ಷಿಣ ಭಾರತದಲ್ಲೇ ದಾಖಲಾಗಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಕೇರಳ ಮತ್ತು ಆಂಧ್ರಪ್ರದೇಶದಲ್ಲಿ 36ಕ್ಕೂ ಹೆಚ್ಚು ಮಂದಿ ಡೆಂಘೆಗೆ ಬಲಿಯಾಗಿದ್ದಾರೆ. ಕಳೆದ ಹತ್ತು ತಿಂಗಳಲ್ಲಿ ಕರ್ನಾಟಕದಲ್ಲಿ 13 ಮತ್ತು ಕೇರಳದಲ್ಲಿ 16 ಮಂದಿ ಡೆಂಘೆಗೆ ಬಲಿಯಾಗಿದ್ದಾರೆ.
ಡೆಂಘೆ- ಕರ್ನಾಟಕ ನಂಬರ್ ಒನ್!
Follow Us