Saturday, March 6, 2021

ಡ್ರೋಣ್ ನೋಂದಾವಣೆ ಕಡ್ಡಾಯ: ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ವ್ಯಾಪಕವಾಗುತ್ತಿರವ ಡ್ರೋಣ್ ಕ್ಯಾಮೆರ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದರ ಕಡ್ಡಾಯ ನೋಂದಾವಣೆಗೆ ನಿರ್ಧರಿಸಿದೆ.  ಜನವರಿ ಎರಡನೇ ವಾರದಲ್ಲಿ ಈ ಸಂಬಂಧ ವಿಸ್ತೃತ ಮಾರ್ಗ ಸೂಚಿ ಹೊರ ಬೀಳುವ ನಿರೀಕ್ಷೆಯಿದೆ. 250 ಗ್ರಾಂ ತೂಕದ ಮೈಕ್ರೋ ಡ್ರೋಣ್ ನಿಂದ ಹಿಡಿದು  ಎರಡು ಕಿಲೋ ಭಾರದ ಡ್ರೋಣ್ ಗೂ ನೋಂದಾವಣೆ ಕಡ್ಡಾಯವಾಗಿರಲಿದೆ. ಡ್ರೋಣ್ ಬಳಕೆಯನ್ನು ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.  ವಾಯುಯಾನ ಸಚಿವಾಲಯದ ಪೋರ್ಟ್ ಲ್   ನಲ್ಲಿ ಡ್ರೋನ್ ನೋಂದಾಯಿಸಬೇಕಾಗಿದೆ.  ಈ ಮಧ್ಯೆ ಡ್ರೋಣ್ ಕ್ಯಾಮೆರ ಬಳಸಿ ತಾಜ್ ಮಹಲ್ ಮೇಲಿನ ದೃಶ್ಯಗಳನ್ನು ಸೆರೆ ಹಿಡಿಯುವುದನ್ನು ಪೊಲೀಸರು ನಿಷೇಧಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮಾನ ಹಾನಿಕರ ವರದಿಗೆ ನಿರ್ಬಂಧ: ಇಂದು ಸಚಿವರ ಅರ್ಜಿ ವಿಚಾರಣೆ

newsics.com ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ರಾಜ್ಯದ ಆರು ಸಚಿವರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಬೆಂಗಳೂರಿನ...

ಹಿರಿಯ ಕೃಷಿ ವಿಜ್ಞಾನಿ ಡಾ. ಎಂ.ಮಹಾದೇವಪ್ಪ ಇನ್ನಿಲ್ಲ

newsics.com ಬೆಂಗಳೂರು: ಖ್ಯಾತ ಕೃಷಿ ವಿಜ್ಞಾನಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ.ಎಂ.ಮಹಾದೇವಪ್ಪ ನಿಧನಹೊಂದಿದ್ದಾರೆ. ಇಂದು ಬೆಳಗ್ಗೆ  ಅವರು ಕೊನೆಯುಸಿರು ಎಳೆದಿದ್ದಾರೆ. ಆರ್.ಟಿ.ಓ. ಕಚೇರಿ ಬಳಿ ಇರುವ ಪೈನ್ ವುಡ್ ಅಪಾರ್ಟ್ ಮೆಂಟ್...

ಏಪ್ರಿಲ್ ಒಂದರಿಂದ ಚಾಲಕನ ಬಳಿ ಕುಳಿತುಕೊಳ್ಳುವ ಪ್ರಯಾಣಿಕನಿಗೆ ಏರ್ ಬ್ಯಾಗ್ ಕಡ್ಡಾಯ

newsics.com ನವದೆಹಲಿ: ಕಾರಿನಲ್ಲಿ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕನಿಗೆ ಏರ್ ಬ್ಯಾಗ್ ಕಡ್ಡಾಯ ಮಾಡಲಾಗಿದೆ. ಏಪ್ರಿಲ್ ಒಂದರಿಂದ ಇದು ಜಾರಿಗೆ ಬರಲಿದೆ. ಹೊಸ ಕಾರುಗಳು ಈ ವ್ಯವಸ್ಥೆ ಅಳವಡಿಸಬೇಕು ಎಂದು ಕೇಂದ್ರ ರಸ್ತೆ...
- Advertisement -
error: Content is protected !!