Thursday, September 23, 2021

ತಿರುಪತಿಯಲ್ಲಿ ಹತ್ತು ದಿನ ವೈಕುಂಠ ದ್ವಾರ ತೆರೆಯಲು ಚಿಂತನೆ

Follow Us

ತಿರುಪತಿ ತಿರುಮಲದಲ್ಲಿ ಪ್ರಸಿದ್ಧ ವೈಕುಂಠ ದ್ವಾರವನ್ನು ಹತ್ತು ದಿನ ತೆರೆದಿಡಲು ಚಿಂತನೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಎರಡು ಬಾರಿ ಮಾತ್ರ ಈ ವೈಕುಂಠ ದ್ವಾರವನ್ನು ತೆರೆಯಲಾಗುತ್ತಿದೆ. ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾದಶಿಯಂದು ಮಾತ್ರ ಈ  ಪವಿತ್ರ ದ್ವಾರಗಳನ್ನು ತೆರೆಯಲಾಗುತ್ತಿದೆ. ಈ ದ್ವಾರದ ಮೂಲಕ ಹಾದು ಹೋದರೆ ಪುನರ್ ಜನ್ಮ ಸರಪಳಿಯಿಂದ ಮುಕ್ತಿ ದೊರೆಯಲಿದೆ. ಶಾಶ್ವತ ಮೋಕ್ಷಪ್ರಾಪ್ತಿಯಾಗಲಿದೆ ಎಂಬುದು ಭಕ್ತರ ನಂಬಿಕೆ. ತಿರುಮಲ ದೇವಸ್ಥಾನ ಈ ಬಗ್ಗೆ ಚಿಂತನೆ ನಡೆಸಿದ್ದು, ತಿರುಮಲ ತಿರುಪತಿ ಆಡಳಿತ ಮಂಡಳಿಯ ಮುಂದೆ ಈ ಪ್ರಸ್ತಾಪ ಇರಿಸಲಿದೆ. ಆಗಮ ಪಂಡಿತರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಮತ್ತಷ್ಟು ಸುದ್ದಿಗಳು

Latest News

ಅಮೆರಿಕ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರ ಸ್ವಾಗತ

newsics.com ವಾಷಿಂಗ್ಟನ್: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್ ತಲುಪಿದ್ದಾರೆ. ವಾಷಿಂಗ್ಟನ್ ಡಿ ಸಿ ಯಲ್ಲಿರುವ ಆ್ಯಂಡ್ರೂಸ್ ವಾಯು ನೆಲೆಗೆ ಬಂದಿಳಿದ ಪ್ರಧಾನಿ...

ನಾಗಾ ಸಂಧಾನಕಾರನ ಹುದ್ದೆಗೆ ಆರ್ ಎನ್ ರವಿ ರಾಜೀನಾಮೆ

newsics.com ನವದೆಹಲಿ: ಕಳೆದ ಹಲವು ವರ್ಷಗಳಿಂದ ಕೇಂದ್ರ ಸರ್ಕಾರದ ನಾಗಾ ಸಂಧಾನಕಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಆರ್ ಎನ್ ರವಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರವಿ ಅವರನ್ನು ಕೇಂದ್ರ ಸರ್ಕಾರ ತಮಿಳುನಾಡು ರಾಜ್ಯಪಾಲರಾಗಿ ನೇಮಕ...

ಮೋಹನ ಹೆಗಡೆ, ಕೆರೆ ಹೆಬ್ಬಾರ್’ಗೆ ನಮ್ಮನೆ ಪ್ರಶಸ್ತಿ: ವಿಭವ್’ಗೆ ‘ನಮ್ಮನೆ ಪುರಸ್ಕಾರ’

newsics.com ಬೆಂಗಳೂರು: ಸೆಲ್ಕೋ ಇಂಡಿಯಾ ಸಿಇಓ, ತಾಳಮದ್ದಲೆ ಅರ್ಥಧಾರಿ ಮೋಹನ‌ ಹೆಗಡೆ ಅವರಿಗೆ ಹಾಗೂ ಕೆರೆ ಹೆಬ್ಬಾರ್ ಎಂದೇ ಹೆಸರಾದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸನ್ ಹೆಬ್ಬಾರ್ ಅವರಿಗೆ ಈ ಬಾರಿಯ 'ನಮ್ಮನೆ ಪ್ರಶಸ್ತಿ'...
- Advertisement -
error: Content is protected !!