ನವದೆಹಲಿ: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ‘ಇದು ತುರ್ತು ಪರಿಸ್ಥಿತಿಗಿಂತ ಹೀನಾಯ’ ಎಂದಿದ್ದಾರೆ.
ಸರ್ಕಾರ ಎಲ್ಲಾ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸಂಪರ್ಕ ಕಡಿತಗೊಳಿಸಲು ಸೂಚಿಸಿದೆ. ಅಂತರ್ಜಾಲ ಕಡಿತ ಕೇವಲ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರ ರಾಜಧಾನಿಗೂ ವಿಸ್ತರಿಸಿದೆ. ಇದು ಸ್ವೀಕಾರಾರ್ಹವಲ್ಲ. ಮೆಟ್ರೋ ನಿಲ್ದಾಣಗಳ ಬಾಗಿಲು ಮುಚ್ಚುವ ಮೂಲಕ ಜನರು ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ಮಾಡಿದ್ದಾರೆ. ಇದು ತುರ್ತು ಪರಿಸ್ಥಿತಿಗಿಂತ ಹೀನಾಯವಾದ ಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. .
ತುರ್ತು ಪರಿಸ್ಥಿತಿಗಿಂತ ಹೀನಾಯ; ಯೆಚೂರಿ
Follow Us