ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಇಜಾಜ್ ಲಕಡ್ವಾಲಾನನ್ನು ಬಿಹಾರದ ಪಟನಾದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಪೊಲೀಸರು ಪಟನಾದಲ್ಲಿ ಬುಧವಾರ ರಾತ್ರಿ ಈ ಕಾರ್ಯಾಚರಣೆ ನಡೆಸಿ, 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗ್ಯಾಂಗ್ಸ್ಟರ್ ಇಜಾಜ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಇಜಾಜ್ನ ಪುತ್ರಿ ನೀಡಿರುವ ಸುಳಿವು ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಕೋರ್ಟ್ ಈತನನ್ನು ಜ.21ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇಜಾಜ್, ಕೊಲೆ, ರಾನ್ಸಮ್, ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಈತ ಭೂಗತ ಪಾತಕಿ ಛೋಟಾ ರಾಜನ್ ಜತೆಗೂ ಕೆಲಸ ಮಾಡಿದ್ದು, ದಾವೂದ್ ಇಬ್ರಾಹಿಂನ ಆಪ್ತರಲ್ಲಿ ಒಬ್ಬ.
ದಾವೂದ್ ಆಪ್ತ ಇಜಾಜ್ ಲಕಡ್ ವಾಲಾ ಬಂಧನ
Follow Us