Saturday, January 22, 2022

ದಿನವಿಡೀ ಸುದ್ದಿಯಾದ ಹೈದರಾಬಾದ್

Follow Us

ಹೈದರಾಬಾದ್: ದೇಶದ ಮಹಾನಗರಗಳ ಪೈಕಿ ಹೈದರಾಬಾದ್ ಗೆ ಅಗ್ರ ಸ್ಥಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ. ಶುಕ್ರವಾರವಂತೂ ಇಡೀ ದಿನ ಸುದ್ದಿ ಮಾಧ್ಯಮಗಳಲ್ಲಿ ಹೈದರಾಬಾದ್ ನದ್ದೇ ಸದ್ದು. ಬೆಳ್ಳಂ ಬೆಳ್ಳಗೆ ಗುಂಡಿನ ಚಕಮಕಿಯ ಸದ್ದು. ನಾಲ್ಕು ಮಂದಿ ಅತ್ಯಾಚಾರಿ ದುರಳರನ್ನು ಯಮಪುರಿಗೆ ಅಟ್ಟಿದ ಪೊಲೀಸರು. ಕನ್ನಡಿಗ ಅಧಿಕಾರಿ ಸಜ್ಜನವರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ದೇಶವ್ಯಾಪಿ ಮೆಚ್ಚುಗೆಗೆ ಪಾತ್ರವಾಯಿತು. ಸಂಜೆ ನಡೆದ್ದದ್ದು ಕ್ರಿಕೆಟ್ ಕದನ. ಭಾರತ – ವೆಸ್ಟ್ ಇಂಡೀಸ್ ಮೊದಲ ಚುಟುಕು ಕದನದಲ್ಲಿ ಕೊಯ್ಲಿ ವೀರಾವೇಶ. ಈ ಪಂದ್ಯ ನಡೆದ್ದದು ಕೂಡ ಹೈದರಾಬಾದ್ ನಲ್ಲಿ. ಹೀಗೆ ದಿನವಿಡಿ ಸುದ್ದಿಯಲ್ಲಿದ್ದದ್ದು ಮುತ್ತಿನ ನಗರಿ ಹೈದರಾಬಾದ್

ಮತ್ತಷ್ಟು ಸುದ್ದಿಗಳು

Latest News

ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ, ಮುಂದುವರಿದ ಗುಂಡಿನ ಚಕಮಕಿ

newsics.com ಶ್ರೀನಗರ: ಜಮ್ಮು ಕಾಶ್ಮೀರದ ಕಿಲ್ಬಾಲ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಲಾಗಿದ್ದು, ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಶೋಪಿಯಾನ್ ಜಿಲ್ಲೆಯ ಕಿಲ್ ಬಾಲ್‌ನಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಉಗ್ರರು ಮತ್ತು ಸೇನೆಯ...

ರಾಜ್ಯದಲ್ಲಿ 42,470 ಮಂದಿಗೆ ಕೊರೋನಾ, 35,140 ಸೋಂಕಿತರು ಗುಣಮುಖ, 26 ಜನ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಶನಿವಾರ (ಜ.22) ಹೊಸದಾಗಿ 42,470 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ. ಶನಿವಾರ 2,19,699 ಜನರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 3,30,447ಕ್ಕೆ ತಲುಪಿದೆ. ಪಾಸಿಟಿವಿಟಿ ದರವು ಶೇ....

ಪ್ಯಾಲೇಸ್ ಗ್ರೌಂಡ್ ಪಾರ್ಟಿ ಹಾಲ್ ಛಾವಣಿ ಕುಸಿದು ನಾಲ್ವರಿಗೆ ಗಾಯ

newsics.com ಬೆಂಗಳೂರು: ನಗರದ ಪ್ಯಾಲೇಸ್‌ ಗ್ರೌಂಡ್‌ನ ಗೇಟ್‌ ನಂಬರ್‌ 8ರಲ್ಲಿ ಪಾರ್ಟಿ ಹಾಲ್‌ನ ಛಾವಣಿ ಕುಸಿದ ಪರಿಣಾಮ ಮೂವರು ಕಾರ್ಮಿಕರಿಗೆ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಕೈ ಮುರಿದಿದೆ. ಪ್ಯಾಲೇಸ್‌ ಗ್ರೌಂಡ್‌ ಪಾರ್ಟಿ ಹಾಲ್‌ನಲ್ಲಿ ಕಾರ್ಯಕ್ರಮವೊಂದರ ಹಿನ್ನೆಲೆ...
- Advertisement -
error: Content is protected !!