ದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲೇ ಪ್ರಧಾನಿ ಮೋದಿಯವರ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.ಪಾಕ್ ಮೂಲದ ಭಯೋತ್ಪಾದಕರ ಗುಂಪು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಪ್ರಧಾನಿ ವಿಶೇಷ ಭದ್ರತಾ ಪಡೆ ಹಾಗೂ ದಿಲ್ಲಿ ಪೊಲೀಸ್‌ಗೆ ಮಾಹಿತಿ ರವಾನಿಸಿದೆ.ರಾಮಲೀಲಾ ಮೈದಾನದಲ್ಲಿ ಡಿ.22ರಂದು ಬಿಜೆಪಿ ಬೃಹತ್ ರ‍್ಯಾಲಿ ಆಯೋಜಿಸಿದ್ದು, ಈ ಸಂದರ್ಭದಲ್ಲಿ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೈಷ್-ಇ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರ ತಂಡ ದಾಳಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಹಾಗೂ ವರ್ಷದ ಆರಂಭದಲ್ಲೇ ಏರ್‌ಸ್ಟ್ರೈಕ್ ಸೇರಿ ಹಲವು ಕಾರಣಗಳು ಮೋದಿ ಗುರಿಯಾಗಿಸಲು ಕಾರಣ ಎನ್ನಲಾಗಿದೆ.