ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಯ ನಂತರ ಪಟಾಕಿ ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗಿದೆ. ತೀವ್ರ ವಾಯು ಮಾಲಿನ್ಯವಾಗಿರೋದ್ರಿಂದ ಶಾಲೆಯಲ್ಲಿ ಹೊರಾಂಗಣ ಚಟುವಟಿಕೆ ನಡೆಸದಂತೆ ದೆಹಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅಲ್ಲದೆ ಈ ಬಗ್ಗೆ ಪೋಷಕರಿಗೂ ತಿಳಿಸುವಂತೆ ಶಾಲೆಗಳಿಗೆ ತಿಳಿಸಲಾಗಿದೆ.
ದೆಹಲಿಯಲ್ಲಿ ಸದ್ಯದ ಮಟ್ಟಿಗೆ ವಾಯು ಮಾಲಿನ್ಯವು ಹೆಚ್ಚಾಗಿದ್ದು ಆತಂಕವನ್ನುಂಟುಮಾಡಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಲು ಎಲ್ಲ ಶಾಲೆಗಳು, ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸುವಂತೆ ಶಿಕ್ಷಣ ನಿರ್ದೇಶನಾಲಯದಿಂದ ನಿರ್ದೇಶನ ನೀಡಲಾಗಿದೆ.
ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಬರುವ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳು ತೀವ್ರ ಮಾಲಿನ್ಯದ ಸ್ಥಿತಿ ಮುಂದುವರೆಯುವವರೆಗೂ ಶಾಲೆಯಲ್ಲಿ ಯಾವುದೇ ಹೊರಾಂಗಣ ಚಟುವಟಿಕೆ ನಡೆಸದಂತೆ ಸುತ್ತೋಲೆ ಹೊರಡಿಸಲಾಗಿದೆ