ನವದೆಹಲಿ: ನವದೆಹಲಿಯ ಅನಾಜ್ ಮಂಡಿಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಕಿಗಾಹುತಿಯಾದ ಕಾರ್ಖಾನೆಯ ಮಾಲಿಕ ರೆಹಾನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಅವಘಡದ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ವರ್ಗಾಯಿಸಿದ ಬೆನ್ನಲ್ಲೇ ವಸತಿ ಪ್ರದೇಶದಲ್ಲಿ ಪರವಾನಗಿ ಇಲ್ಲದೆ, ಅಗ್ನಿ ಶಾಮಕ ದಳದಿಂದ ಅನುಮತಿ ಪಡೆಯದೆ ಕಾರ್ಖಾನೆ ಸ್ಥಾಪಿಸಿದ ಆರೋಪದ ಮೇಲೆ ಮಾಲೀಕನನ್ನು ಬಂಧಿಸಲಾಗಿದೆ.