ನವದೆಹಲಿ: ಏಷ್ಯಾ ಹುಲಿಗಳ ಏಕೈಕ ಆಶ್ರಯ ಧಾಮವಾಗಿರುವ ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಐದು ವರ್ಷಗಳಲ್ಲಿ ಸಿಂಹಗಳ ಸಂಖ್ಯೆ ಶೇ. 100ರಷ್ಟು ಹೆಚ್ಚಳವಾಗಿದೆ. ಅಲ್ಲಿನ ಸರ್ಕಾರ ಈ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ್ದು, ಸಿಂಹಗಳ ಸಂಖ್ಯೆ 1000ವನ್ನು ಮೀರುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದರೆ, ಈ ಉದ್ಯಾನದಲ್ಲಿ ಸಿಂಹಗಳು ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಿಸುತ್ತಿವೆ. 2018ರಲ್ಲಿ 28 ಸಿಂಹಗಳು ಸಾಂಕ್ರಾಮಿಕ ಕಾಯಿಲೆಗೆ ಬಲಿಯಾಗಿದ್ದವು. ಸುಪ್ರೀಂಕೋರ್ಟ್ ಕೂಡ ಈ ಕುರಿತು ಕಾಳಜಿ ವ್ಯಕ್ತಪಡಿಸಿತ್ತು.