ನವದೆಹಲಿ: ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದ ಆಯ್ದ ಕಡಲತೀರಗಳಿಗೆ ’ನೀಲಿ ಧ್ವಜ’ ಪ್ರಮಾಣೀಕರಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಕರ್ನಾಟಕದ ಎರಡು ಸಮುದ್ರ ತೀರಗಳೂ ಸೇರಿವೆ
ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಅವರು ಸೋಮವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಘೋಘಲಾ ಬೀಚ್ (ಡಿಯು), ಶಿವರಾಜ್ಪುರ ಬೀಚ್ (ಗುಜರಾತ್), ಭೋಗವೇ (ಮಹಾರಾಷ್ಟ್ರ), ಪಡುಬಿದ್ರಿ ಮತ್ತು ಕಸರ್ಕೋಡ್ (ಕರ್ನಾಟಕ), ಕಪ್ಪಾದ್ ಬೀಚ್ (ಕೇರಳ), ಕೋವಲಂ ಬೀಚ್ (ತಮಿಳುನಾಡು), ಈಡನ್ ಬೀಚ್ (ಪುದುಚೇರಿ), ರುಶಿಕೊಂಡ್ ), ಮಿರಾಮರ್ ಬೀಚ್ (ಗೋವಾ), ಗೋಲ್ಡನ್ ಬೀಚ್ (ಒಡಿಶಾ), ರಾಧನಗರ ಬೀಚ್ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) ಮತ್ತು ಬಂಗಾರಂ ಬೀಚ್ (ಲಕ್ಷದ್ವೀಪ)ಗಳು ಇದರಲ್ಲಿ ಸೇರಿವೆ
ದೇಶದ 13 ಬೀಚ್ಗಳಿಗೆ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ
Follow Us