ಜಾರ್ಖಂಡ್:
ಜಿಲ್ಲೆಯ ಲೇಥ್ಹಾರ್ನಲ್ಲಿ ಶನಿವಾರ ನಕ್ಸಲರ ದಾಳಿಗೆ ನಾಲ್ವರು ಪೊಲೀಸರು ಬಲಿಯಾಗಿದ್ದಾರೆ.
ಶಸ್ತ್ರಸಜ್ಜಿತ ನಕ್ಸಲರು ಲುಕಿಯಾಟಂಡ್ ಗ್ರಾಮದ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಎಸ್ಐ ಸುಕ್ರಾ ಓರನ್, ಹೋಂ ಗಾಡ್ರ್ಸ್ ಜವಾನರಾದ ಸಿಕಂದರ್ ಸಿಂಗ್, ಜಮುನಾ ಪ್ರಸಾದ್, ಶಂಭುಪ್ರಸಾದ್ ನಕ್ಸಲರ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೋರ್ವ ಹೋಂ ಗಾಡ್ರ್ಸ್ ಜವಾನನೊಬ್ಬ ದಾಳಿಯಿಂದ ಬಚಾವಾಗಿದ್ದಾನೆ ಎಂದು ತಿಳಿದುಬಂದಿದೆ.
ನಕ್ಸಲರ ಗುಂಡಿಗೆ ನಾಲ್ವರು ಪೊಲೀಸರು ಬಲಿ
Follow Us