ನವದೆಹಲಿ: ಕಳೆದ ಐದು ವರ್ಷಗಳ ಅವಧಿಗೆ ಹೋಲಿಸಿದರೆ ನಕ್ಸಲ್ ಸಂಬಂಧಿತ ಹಿಂಸಾಚಾರಗಳು ಶೇ. 43ರಷ್ಟು ಇಳಿಮುಖವಾಗಿದೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ಬುಧವಾರ ತಿಳಿಸಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಪೂರಕ
ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ರೆಡ್ಡಿ,
ನಕ್ಸಲ್ ಚಟುವಟಿಕೆ ನಿಗ್ರಹ ಕುರಿತಂತೆ ಸಂಬಂಧಿತ ಭಾಗೀದಾರರೊಂದಿಗೆ
ಸಮಾಲೋಚನೆ ನಡೆಸಿದ ನಂತರ 2015ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ
ನೀತಿ ಮತ್ತು ಕ್ರಿಯಾ ಯೋಜನೆಯನ್ನು ರೂಪಿಸಿತ್ತು.
‘ದೇಶದಲ್ಲಿ ಕೇವಲ 10 ಜಿಲ್ಲೆಗಳಲ್ಲಿ ಮೂರನೇ
ಎರಡರಷ್ಟು ಎಡಪಂಥೀಯ ಉಗ್ರವಾದವಿದೆ. ಮೇ 2014ರಿಂದ ಏಪ್ರಿಲ್ 2019ರವರೆಗೆ ನಕ್ಸಲ್ ಸಂಬಂಧಿತ ಹಿಂಸಾಚಾರ ಘಟನೆಗಳು ಶೇ 43ರಷ್ಟು
ಕಡಿಮೆಯಾಗಿವೆ’ ಎಂದು ಮಾಹಿತಿ ನೀಡಿದ್ದಾರೆ.