- ತಮಿಳುನಾಡಿನ ಮುಖ್ಯಪೇದೆಯಿಂದ ತಿಹಾರ್ ಜೈಲ್ ಗೆ ಪತ್ರ
ಮಧುರೈ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧ ಎಂದು ತಮಿಳುನಾಡು ಪೊಲೀಸ್ ಇಲಾಖೆಯ ಮುಖ್ಯ ಪೇದೆಯೊಬ್ಬರು ತಿಳಿಸಿದ್ದಾರೆ.
ಈ ಕೆಲಸಕ್ಕೆ ತನಗೆ ಯಾವುದೇ ಹಣ ನೀಡುವುದು ಬೇಡ ಎಂದು ತಮಿಳುನಾಡು ಶಿವಗಂಗೆ ಜಿಲ್ಲೆಯ ಮೂಲದ 42 ವರ್ಷದ ಎಸ್. ಸುಭಾಷ್ ಶ್ರೀನಿವಾಸನ್ ತಿಹಾರ್ ಜೈಲಿನ ಡಿಜಿಪಿ ಉಸ್ತುವಾರಿಗೆ ಪತ್ರ ಬರೆದಿದ್ದಾರೆ. ಆದರೆ ತಿಹಾರ್ ಜೈಲ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ಭೀಕರ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲು ಯಾರೂ ಮುಂದೆ ಬಂದಿಲ್ಲ ಎಂದು ನಾನು ತಿಳಿದುಕೊಂಡೆ. ಈ ಹಿನ್ನೆಲೆಯಲ್ಲಿ ನಾನು ಸ್ವಯಂಸೇವಕನಾಗಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.