ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬುಧವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದರು. ನಿರ್ಮಲಾ ಹಿರಿಯ ಸಹೋದರಿಯಿದ್ದಂತೆ , ನಾನು ಅವರ ಕಿರಿಯ ಸಹೋದರನಂತೆ ಎಂದು ಸ್ಪಷ್ಟಪಡಿಸಿದರು. ಲೋಕಸಭೆಯಲ್ಲಿ ಸೋಮವಾರ ಅಧೀರ್ ರಂಜನ್ ಚೌಧರಿ ಮಾತನಾಡುತ್ತಾ, ನಿರ್ಮಲಾ ಸೀತಾರಾಮನ್ “ನಿರ್ಬಲ” ಹಣಕಾಸು ಸಚಿವರು ಎಂದು ಲೇವಡಿಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ನಿರ್ಮಲಾ ಸೀತಾರಾಮನ್ ಕುರಿತ ಅಧೀರ್ ರಂಜನ್ ಚೌಧರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದವು.
ನಿರ್ಮಲಾ ಸೀತಾರಾಮನ್ ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ
Follow Us