ಮುಂಬೈ: ದೇಶದಿಂದ ಪಲಾಯನಗೈದಿರುವ ವಜ್ರ ಉದ್ಯಮಿ ನೀರವ್ ಮೋದಿಯನ್ನು ತಲೆಮರೆಸಿಕೊಂಡಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಮುಂಬೈನ ಮನಿ ಲ್ಯಾಂಡರಿಂಗ್ ನಿಯಂತ್ರಣಾ ನ್ಯಾಯಾಲಯ ಘೋಷಿಸಿದೆ.
ಕಳೆದ ಜನವರಿಯಲ್ಲಿ ಉದ್ಯಮಿ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದ ಈ ನ್ಯಾಯಾಲಯ ಈಗ ನೀರವ್ ಮೋದಿಯನ್ನೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಆರ್ಥಿಕ ಅಪರಾಧಿ ಎಂದಿದೆ. ಅಲ್ಲದೆ, ಭಾರತ, ಯುಕೆ ಹಾಗೂ ಯುಎಇಯಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳಲೂ ಅವಕಾಶ ಮಾಡಿಕೊಟ್ಟಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಪಡೆದಿದ್ದ 13,000 ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಭಾರತದಿಂದ ತಲೆಮರೆಸಿಕೊಂಡಿದ್ದ ಉದ್ಯಮಿ ನೀರವ್ ಮೋದಿಯನ್ನು ಮಾರ್ಚ್ನಲ್ಲಿ ಲಂಡನ್ನಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ಲಂಡನ್ನ ವರ್ಡ್ಸ್ವರ್ತ್ ಜೈಲಿನಲ್ಲಿದ್ದು, ಗಡೀಪಾರಿಗೆ ಸಂಬಂಧಪಟ್ಟಂತೆ ಯುಕೆ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ನೀರವ್ ಮೋದಿಯನ್ನು ‘ದೇಶಭ್ರಷ್ಟ ಆರ್ಥಿಕ ಅಪರಾಧಿ’ ಎಂದ ಕೋರ್ಟ್
Follow Us