ನವದೆಹಲಿ; ಭರತನಾಟ್ಯ ಕಲಾವಿದೆ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷೆ , ಪದ್ಮಶ್ರೀ ಪುರಸ್ಕೃತ ಲೀಲಾ ಸ್ಯಾಮ್ ಸನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಚೆನ್ನೈ ನ ಕಲಾಕ್ಷೇತ್ರ ಫೌಂಡೇಷನ್ ನ ಕೂತಾಂಬಲಮ್ ಸಭಾಂಗಣದ ನವೀಕರಣಕ್ಕಾಗಿ 7.02 ಕೋಟಿ ರೂ. ವೆಚ್ಚವಾಗಿರುವ ಕುರಿತು ತಪ್ಪು ಲೆಕ್ಕ ತೋರಿಸಿರುವ ಹಾಗೂ ಸಾಮಾನ್ಯ ಹಣಕಾಸು ನೀತಿಯನ್ನು ಉಲ್ಲಂಘಿಸಿರುವ ಆರೋಪದ ಸಂಬಂಧ ಅವರ ವಿರುದ್ಧ ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.