ನವದೆಹಲಿ: ಕೇಂದ್ರ ಗೃಹ ಸಚಿವಾಲಯ ದೇಶದ ಏಳು ನೆರೆ ಪೀಡಿತ ರಾಜ್ಯಗಳಿಗೆ ಒಟ್ಟಾರೆಯಾಗಿ 5,908 ಕೋಟಿ ರೂ. ಪರಿಹಾರದ ಹಣ ಬಿಡುಗಡೆ ಮಾಡಿದೆ.
ಕರ್ನಾಟಕಕ್ಕೆ 1869.85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದಂತೆ ಅಸ್ಸಾಂಗೆ 616 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 284 ಕೋಟಿ ರೂ., ಮಧ್ಯಪ್ರದೇಶಕ್ಕೆ 1749 ಕೋಟಿ ರೂ. , ಮಹಾರಾಷ್ಟ್ರದಲ್ಲಿ 956 ಕೋಟಿ ರೂ., ತ್ರಿಪುರದಲ್ಲಿ 63 ಕೋಟಿ ರೂ. ಹಾಗೂ ಉತ್ತರಪ್ರದೇಶಕ್ಕೆ 367 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿ ಗೃಹ ಸಚಿವಾಲಯ ಅದೇಶ ಹೊರಡಿಸಿದೆ.