ನವದೆಹಲಿ: ಸುಂದರಿಯರಾದ ಯುವತಿಯರ ಮೂಲಕ ನೌಕಾ ಪಡೆ ಅಧಿಕಾರಿಗಳಿಗೆ ಬಲೆ ಬೀಸಿ ಪಾಕ್ ಪರ ಗೂಢ ಚರ್ಯೆ ನಡೆಸಿದ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ಗಂಭೀರ ತನಿಖೆ ನಡೆಸುತ್ತಿದ್ದು, ವಿಶಾಖ ಪಟ್ಟಣಂಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದೆ. ಪಾಕಿಸ್ತಾನದ ಐಎಸ್ ಐ ಗೆ ಮಾಹಿತಿ ವಿನಿಮಯ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಲಾಗಿದೆ