ಮುಂಬೈ: ಪತ್ನಿಯ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಪಡಿ ಉದ್ಯಮಿ ಆಗಿರುವ ಪತಿಯನ್ನು ಬಂಧಿಸಲಾಗಿದೆ. ಮುಂಬೈ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 2017ರಿಂದ ಸತತವಾಗಿ ಪತಿಯ ಸ್ನೇಹಿತರು ಆತನ ಕುಮ್ಮಕ್ಕಿನಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 39 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. 2017 ಜೂನ್ 15 ರಂದು ಮೊದಲ ಬಾರಿ ಈ ಕೃತ್ಯ ಎಸಗಲಾಗಿತ್ತು. ಕಾರಿನಲ್ಲಿ ತೆರಳುತ್ತಿದ್ದಾಗ ನನ್ನ ಪತಿ ಕಾರಿನ ಹಿಂದಿನ ಸೀಟಿನ ಕುಳಿತರು. ಪತಿಯ ಸ್ನೇಹಿತ ಕಾರ್ ಡ್ರೈವ್ ಮಾಡುತ್ತಿದ್ದ. ನನ್ನನ್ನು ಮೊದಲ ಸೀಟ್ ನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದ. ಈ ಸಂದರ್ಭದಲ್ಲಿ ಆತ ನನ್ನ ಮೇಲೇ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.