
ತಿರುಪತಿ; ತಿರುಚಾನೂರಿನ ಪದ್ಮಾವತಿ ಅಮ್ಮನವರಿಗೆ ತಿರುಪತಿ ಮೂಲಕ ಭಕ್ತರೊಬ್ಬರು 2.10 ಲಕ್ಷ ರೂಪಾಯಿ ೧೦ ಪಟ್ಟು ಸೀರೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ
ಮಂಗಳವಾರ ಸಂಜೆ ಹನುಮಂತ ವಾಹನ ಸೇವೆಯಲ್ಲಿ ಪಾಲ್ಗೊಂಡಿದ್ದ ತಿರುಪತಿಯ ಕೃಪಾಕರ ಹೆಸರಿನ ಭಕ್ತರು ಈ ಕಾಣಿಕೆ ನೀಡಿರುವುದಾಗಿ ಟಿಟಿಡಿ ಮಾಹಿತಿ ನೀಡಿದೆ.
ವಾರ್ಷಿಕ ಬ್ರಹ್ಮೋತ್ಸವದ ಸಂದರ್ಭದಲ್ಲಿ ಅಮ್ಮನವರಿಗೆ ಸೀರೆಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಿಸಿತ್ತು.